ಬಾಗಲೂರಿನಲ್ಲಿ ‘ಲೂಟಿ ಹಾಡು
Posted date: 19 Mon, May 2014 – 10:17:18 PM

ಸ್ಟುಡಿಯೋ ಫ಼ೋಕಸ್ ಲಾಂಛನದಲ್ಲಿ ನಿರಂಜನ್.ಎನ್.ಎಂ ನಿರ್ಮಿಸುತ್ತಿರುವ ‘ಲೂಟಿ’ ಚಿತ್ರಕ್ಕಾಗಿ ನಿರಂಜನ್ ಅವರು ಬರೆದಿರುವ  ‘ಮಳವಳ್ಳಿ ಮಳ್ಳಿ ನಾನು ಮಸ್ತಾಗಿಲ್ವಾ‘ ಎಂಬ ಹಾಡಿನ ಚಿತ್ರೀಕರಣ ಬಾಗಲೂರು ಬಳಿಯ ಜೈನ್ ಫ಼ಾರಂನಲ್ಲಿ ನಡೆದಿದೆ. ಮದನ್-ಹರಿಣಿ ನೃತ್ಯ ನಿರ್ದೇಶನ ಮಾಡಿದ ಈ ಹಾಡಿನ ಚಿತ್ರೀಕರಣದಲ್ಲಿ ಸಾಧುಕೋಕಿಲ, ಆಂಡ್ರಿಯ ಡಿಸೋಜ(ದುಬೈ), ಬಿ.ಜಯಶ್ರೀ ಹಾಗೂ ಮೋಹನ್ ಜುನೇಜ ಅಭಿನಯಿಸಿದ್ದರು.
   ಗಿರೀಶ್ ಕಂಪ್ಲಾಪುರ್ ನಿರ್ದೇಶನದ ಈ ಚಿತ್ರಕ್ಕೆ ಧರ್ಮವಿಶ್ ಸಂಗೀತ ನೀಡುತ್ತಿದ್ದಾರೆ. ರಾಜೇಂದ್ರನ್ ಎಂ ಛಾಯಾಗ್ರಹಣ, ದಾಮೋದರ್ ಸಂಕಲನ ಹಾಗೂ ಮದನ್-ಹರಿಣಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಇಶಾ ಕೊಪ್ಪಿಕರ್, ಧ್ರುವ, ಶ್ವೇತ ಪಂಡಿತ್, ದಿಲೀಪ್‌ರಾಜ್, ದೀಪಿಕಾದಾಸ್, ಸಾಧುಕೋಕಿಲ, ಆಂಡ್ರಿಯ ಡಿಸೋಜ(ದುಬೈ), ಬಿ.ಜಯಶ್ರೀ, ಮೋಹನ್ ಜುನೇಜ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed